Posts

Showing posts from March, 2019

Tunga EcoClub

Image
Collection   for  Education Purpose  Thimmana Kagga     ಜೀವನವದೊಂದು ಕಲೆ ಕಲೆಯ ಕಲಿಸುವುದೆಂತು । ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ।। ಆವುದೋ ಕುಶಲತೆಯದೊಂದಿರದೆ ಜಯವಿರದು । ಆ ವಿವರ ನಿನ್ನೊಳಗೆ ಮಂಕುತಿಮ್ಮ ।। ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ । ಕೊರತೆಯೊಂದನು ನೀನು ನೆನೆನೆನೆದು ಕೆರಳಿ ।। ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ । ನರಳುವುದು ಬದುಕೇನೊ ಮಂಕುತಿಮ್ಮ ।। ಜಾನಪದ ಶಿಷ್ಟಿಯಲಿ ಸಂಪತ್ಸಮಷ್ಟಿಯಲಿ । ಜ್ಞಾನ ಸಂಧಾನದಲಿ ಮೌಲ್ಯ ಗಣನೆಯಲಿ ।। ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ । ಆನಂದ ಧರೆಗಂದು ಮಂಕುತಿಮ್ಮ ।। ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ । ಫಲ ಮಾಗುವಂದು ತುತ್ತೂರಿ ದನಿಯಿಲ್ಲ ।। ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ । ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ।। ಎದ್ದೆದ್ದು ಬೀಳುತಿಹೆ ಗುದ್ದಾಡಿ ಸೋಲುತಿಹೆ । ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ।। ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿ । ನ್ನುದ್ಧಾರವೆಷ್ಟಾಯ್ತೊ ಮಂಕುತಿಮ್ಮ ।। ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಗಸು । ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ।। ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ । ಜಸವು ಜನಜೀವನಕೆ ಮಂಕುತಿಮ್ಮ ।। ಅರಿ ಮಿತ್ರ ಸತಿ ಪುತ್ರ ಬಂಧು ಬಳಗವದೆಲ್ಲ । ಕರುಮದವತ...